ಯೋಜನೆಗಳು
ಸಂಪದ ಫೌಂಡೇಶನ್ನಿನ ಪ್ರಸ್ತುತ ಯೋಜನೆಗಳು ಕೆಳಗಿನಂತಿವೆ:
- ಸಂಪದ.ನೆಟ್ - ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ.
- kannadalearning.org - ಮುಕ್ತ ಹಾಗೂ ಉಚಿತ ಆನ್ಲೈನ್ ಕನ್ನಡ ಕಲಿಕೆ ಕೇಂದ್ರ.
- planetkannada.com - ಅಂತರ್ಜಾಲದ ಕನ್ನಡ ಪುಟಗಳನ್ನು ಒಂದೆಡೆಯೇ ಓದಲು ಸಾಧ್ಯವಾಗುವ ಕನ್ನಡ ಲೋಕ
- Kannada Localization - ಕನ್ನಡ ಲೋಕಲೈಸೇಶನ್ ಯೋಜನೆ. ಸ್ವತಂತ್ರ ಹಾಗೂ ಮುಕ್ತ ತಂತ್ರಾಂಶಗಳಾದ ಲಿನಕ್ಸ್ ಮುಂತಾದ ತಂತ್ರಾಂಶಗಳಲ್ಲಿ ಕನ್ನಡವನ್ನು ತರುವ ಒಂದು ಪ್ರಯತ್ನ.
ಸಂಪದ ಫೌಂಡೇಶನ್ನಿನ ಮೂಲಕ ಹಮ್ಮಿಕೊಳ್ಳಲಾಗಿರುವ ಹೊಸ ಯೋಜನೆಗಳು, ಕಾರ್ಯರೂಪಕ್ಕೆ ಇನ್ನೂ ಬರಬೇಕಿರುವ ಯೋಜನೆಗಳು ಕೆಳಗಿನಂತಿವೆ:
- ಪ್ರಾಜೆಕ್ಟ್ ಅಕ್ಷರಸಿರಿ - ಸಾಂಪ್ರದಾಯಿಕ ಪ್ರೆಸ್ ಗಳಲ್ಲಿ ಬಳಕೆಯಲ್ಲಿದ್ದ ಕನ್ನಡ ಅಚ್ಚುಗಳನ್ನು ಡಿಜಿಟಲ್ ಜಗತ್ತಿಗೆ ತರುವ ಪ್ರಯತ್ನ.
ಯೋಜನೆಗಳ ಸಂಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.
ಸಂಪದ ಫೌಂಡೇಶನ್ ಮೂಲಕ ನಿರ್ವಹಿಸಬಹುದಾದ ಹೊಸ ಯೋಜನೆಗಳನ್ನು ಕುರಿತ ಸಲಹೆ ಅಭಿಪ್ರಾಯ ಓದುಗರು/ಸದಸ್ಯರು ನಿರ್ವಾಹಕರಿಗೆ ಕಳುಹಿಸಬಹುದು.
ಇದಲ್ಲದೆ, ಸಂಪದ ಫೌಂಡೇಶನ್ ಅಂತರ್ಜಾಲದಲ್ಲಿ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಹಲವು ಕನ್ನಡ ಅಂತರ್ಜಾಲ ತಾಣಗಳು ಓದುಗರಿಗೆ ಲಭ್ಯ:
- ಪದಗತಿ - ಕೆ ವಿ ನಾರಾಯಣ.
- ಆರೋಗ್ಯ ಸಂಪದ - ಕಕ್ಕಿಲಾಯ ನೇತೃತ್ವದ ಕನ್ನಡ ಡಾಕ್ಟರರ ಸಮುದಾಯ.
- ಕೃಷಿ - ಶ್ಯಾಮ ಕಶ್ಯಪ.
- ಬ್ಲಾಗಂಬರಿ - ಅಬ್ದುಲ್ ರಶೀದ್.
- ಇಸ್ಮಾಯಿಲ್ ಪುಟ.
- ಓ ಎಲ್ ಎನ್ ಸ್ವಾಮಿ.
ಆಸಕ್ತ ಬರಹಗಾರರು ಸಂಪದದ ಛಾವಡಿಯಡಿ ಅಂತರ್ಜಾಲತಾಣವೊಂದಕ್ಕಾಗಿ ಕೋರಿಕೆ ಸಲ್ಲಿಸಬಹುದು. ಕೋರಿಕೆ ಸೂಕ್ತವಾಗಿದ್ದಲ್ಲಿ ಅಂತರ್ಜಾಲ ತಾಣವೊಂದನ್ನು ನಿರ್ಮಿಸುವುದರ ಮೂಲಕ ಪ್ರೋತ್ಸಾಹಿಸಲಾಗುವುದು.
